ಶೀಘ್ರದಲ್ಲೇ ಓಲಾ ಹಾಗು ಊಬರ್ ದರಗಳನ್ನ ಸರ್ಕಾರ ಫಿಕ್ಸ್ ಮಾಡುತ್ತೆ | Oneindia Kannada

2018-01-08 331

ಬೆಂಗಳೂರಿನಲ್ಲಿ ಸಂಚರಿಸುವ ಮೊಬೈಲ್ ಅಪ್ಲಿಕೇಷನ್ ಆಧಾರಿತ ಓಲಾ, ಊಬರ್ ಸೇರಿದಂತೆ ಹಲವು ಕಂಪನಿಗಳ ಟ್ಯಾಕ್ಸಿ ಗಳಿಗೆ ಸಾರಿಗೆ ಇಲಾಖೆಯು ಕನಿಷ್ಠ ಮತ್ತು ಗರಿಷ್ಠ ಪ್ರಯಾಣ ದರ ನಿಗದಿ ಮಾಡಿದೆ. ಶೀಘ್ರದಲ್ಲೇ ಸರ್ಕಾರ ದರವನ್ನು ಪ್ರಕಟಿಸುವ ಸಾದ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಟ್ಯಾಕ್ಸಿ ಬಳಕೆದಾರರ ಸಂಖ್ಯೆ ಹೆಚ್ಚಳವಾಗಿರುವುದರಿಂದ ಟ್ಯಾಕ್ಸಿ ಸೇವಾ ಕಂಪನಿಗಳು ಹೆಚ್ಚಿನ ದರ ವಸೂಲಿ ಮಾಡುತ್ತಿವೆ ಎಂದು ಪ್ರಯಾಣಿಕರು ಸಾರಿಗೆ ಇಲಾಖೆಗೆ ದೂರು ನೀಡಿದ್ದರು. ಅಂತೆಯೇ ಕಂಪನಿಗಳು ಕಡಿಮೆ ಕಮಿಷನ್ ನೀಡುತ್ತಿವೆ ಎಂದು ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರು ಆರೋಪಿಸಿದ್ದರು. ನೂತನ ದರ ಅನುಷ್ಠಾನಕ್ಕೆ ಬಂದರೆ ಆ ದರಕ್ಕಿಂತ ಕಡಿಮೆ ದರದಲ್ಲಿ ಟ್ಯಾಕ್ಸಿ ಕಂಪನಿಗಳು ಸೇವೆ ನೀಡಲು ಸಾಧ್ಯವಿಲ್ಲ. ಇದು ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರಿಗೆ ಅನ್ವಯವಾಗುತ್ತದೆ ಆದರೆ, ಪ್ರಯಾಣಿಕರಿಗೆ ಹೆಚ್ಚಿನ ಲಾಭವಾಗುವುದಿಲ್ಲ.

Due to maximum usage of cab services in the city, before long government will decide even Ola and uber taxi fares

Videos similaires